ಶಿಶು ಪೋಷಕ ತೈಲ
ಮಗುವಿನ ದೈನಂದಿನ ಆರೈಕೆಯ ಮಾರ್ಗೋಪಚಾರಗಳು
ಮಗುವಿನ ದೈನಂದಿನ ಸ್ನಾನ
ಮಗುವಿನ ದೈನಂದಿನ ಸ್ನಾನವು ಆರೋಗ್ಯಪೂರ್ಣ ಬೆಳವಣಿಗೆಗೆ ಮತ್ತು ಅಂಗಾಂಶಗಳ ಸುಂದರ ವಿಕಸನಕ್ಕೆ ಅತ್ಯಂತ ಮಹತ್ವಪೂರ್ಣ. ಸ್ನಾನದ ಮೊದಲು ಎಣ್ಣೆಯ ಮಾಧ್ಯಮದಿಂದ ಮಾಡುವ ಅಭ್ಯಂಗವು ದೇಹದ ಅಂಗಾಂಗಗಳಿಗೆ ತಿಕ್ಕಿ ತೀಡುವ ಪ್ರಕ್ರಿಯೆ (ಮಸಾಜ್) ಇದು, ಚರ್ಮಕ್ಕೆ, ಮಾಂಸಗಳಿಗೆ ಪೋಷಣೆಯನ್ನು ಕೊಟ್ಟು ಇವುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮೃದುವಾಗಿ ತಿಕ್ಕುವ ಕ್ರಿಯೆಯಿಂದ ಅಂಗಾಂಗಗಳು ಸುಂದರವಾಗಿ ಬೆಳೆಯುತ್ತವೆ. ಈ ಮಧ್ಯೆ ಮಾಡುವ ವ್ಯಾಯಾಮಗಳಿಂದ ಎಲುಬು, ಮಾಂಸಗಳು ಧೃಢಗೊಂಡು ಮಗುವು ಬೆಳೆಯುತ್ತದೆ. ಹೀಗೆ ಮಾಡುವ ಮಸಾಜ್ ಸುಮಾರು 20 ರಿಂದ 30 ನಿಮಿಷಗಳವರೆಗೆ ಮಾಡಬಹುದು. ಈ ಎಲ್ಲಾ ಕಾರ್ಯಗಳು ಉತ್ತಮ ಫಲಕೊಡಲು ಮಸಾಜ್‌ಗೆ ಉಪಯೋಗಿಸುವ ಎಣ್ಣೆಯು ಶಿಶುಗಳಿಗೆ ಅತ್ಯುತ್ತಮ ಪೋಷಕ ಎಣ್ಣೆಯಾಗಿರಬೇಕು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿಯವರ ಶಿಶು ಪೋಷಕ ತೈಲ ಈ ಮೇಲೆ ತಿಳಿಸಿದ ಎಲ್ಲಾ ಆಯಾಮಗಳಿಂದ ಚಿಂತಿಸಿ, ಅಭಿವೃದ್ಧಿಪಡಿಸಲಾಗಿದ್ದು, ಈ ಔಷಧವನ್ನು ಮೇಲೆ ತಿಳಿಸಿದಂತೆ ಮಕ್ಕಳ ಅಭ್ಯಂಗ (ಎಣ್ಣೆ ಹಚ್ಚಿ ಸ್ನಾನ)ಕ್ಕೆ ಉಪಯೋಗಿಸಬಹುದು.
ಸ್ನಾನದ ಬಳಿಕದ ಆರೈಕೆ: ಮಗುವಿಗೆ ಸ್ನಾನವಾದ ಬಳಿಕ, ತಲೆಯನ್ನು ಮೆತ್ತಗಿನ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ಬಳಿಕ ಮೃದುವಾದ ಹತ್ತಿಯ ಒಣ ಬಟ್ಟೆಯಿಂದ ಮಗುವನ್ನು ಆವರಿಸಿ, ಮಗುವು ನಿದ್ದೆಮಾಡಲು ಅನುಕೂಲ ಮಾಡಿಕೊಡಬಹುದು. ಪದೇ ಪದೇ ಶೀತವಾಗುವುದನ್ನು ತಡೆಯಲು ನೆತ್ತಿಯ ಮೇಲೆ ಸುಮಾರು ಒಂದು ಚಮಚೆಯಷ್ಟು ರಾಸ್ನಾದಿ ಚೂರ್ಣವನ್ನು ಲೇಪಿಸಬಹುದು. ಕೆಲವಡೆ ಕಾಫಿ ಪುಡಿಯನ್ನು ಹಾಕುವ ಕ್ರಮವೂ ಇದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿಯವರ ರಾಸ್ನಾದಿ ಚೂರ್ಣ ಲಭ್ಯವಿದ್ದು ಈ ಔಷಧವನ್ನು ಮೇಲೆ ತಿಳಿಸಿದಂತೆ ನೆತ್ತಿಯ ಮೇಲೆ ಹಚ್ಚಿದಲ್ಲಿ ಪದೇ ಪದೇ ಶೀತಾದಿಗಳನ್ನು ತಡೆಯಲು ಸಹಕಾರಿ.
ಈ ಔಷಧಿಗಳ ಮಾಹಿತಿಗಳು ಹೆತ್ತವರ ತಿಳುವಳಿಕೆಗಾಗಿ ಪ್ರಕಟಿಸಲ್ಪಟ್ಟಿದ್ದು, ಹೆಚ್ಚಿನ ಮಾಹಿತಿಗಾಗಿ ತಜ್ಞ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬೇಕು.
ಎಸ್.ಡಿ.ಎಮ್. ತಯಾರಿಕೆಯ ಇನ್ನಿತರ ಅತ್ಯತ್ತಮ ಔಷಧಗಳು:
ಸಂಧಿಲಿನ್ - ನೋವು ನಿವಾರಕ ಲಿನಿಮೆಂಟ್
ಕ್ಷೀರಬಲಾ ತೈಲ 101 - ಬಲವರ್ಧಕ, ವೃದ್ಧಾಪ್ಯದ ತೊಂದರೆಗಳಿಗೆ ದಿನನಿತ್ಯ ಹತ್ತು ಹನಿ ಸೇವಿಸಬೇಕು.
ಅಭಯ ಕಷಾಯ ಚೂರ್ಣ - ವಾತದೋಷ ನಿವಾರಕ, ರುಚಿ ಮತ್ತು ಹಸಿವೆ ಹೆಚ್ಚಿಸುವುದು.
ಅಭಯ ಮಸಾಜ್ ಎಣ್ಣೆ - ದೈನಂದಿನ ಮಸಾಜ್‌ಗಾಗಿ ಎಣ್ಣೆ
ಗಂಧ ಕರ್ಪೂರ - ಫಂಗಲ್ ಸೋಂಕು ಮತ್ತು ಇತರ ಚರ್ಮದ ಕಾಯಿಲೆಗಳಲ್ಲಿ ಹಚ್ಚುವ ಪರಿಣಾಮಕಾರಿ ಮುಲಾಮು.
ಕಾಸ ಅಭಯ - ಕಫ, ಕೆಮ್ಮು ನಿವಾರಣೆಗೆ ಸಹಾಯ ಮಾಡುತ್ತದೆ.
ಪೂಗ ಸಿರಪ್ - ಮಕ್ಕಳಿಗಾಗಿ ಸಾಮಾನ್ಯ ಟಾನಿಕ್. ಜೀರ್ಣಕಾರಿ, ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
ಮಂಜುಶ್ರೀ ಹೇರ್ ಆಯಿಲ್ - ಕೂದಲಿನ ಸಂರಕ್ಷಣೆ ಮತ್ತು ಬೆಳವಣಿಗೆಗೆ
ಚವನಪ್ರಾಶ - ಕೆಮ್ಮು, ದಮ್ಮು, ಶ್ವಾಸಕೋಶದ ದೌರ್ಬಲ್ಯಗಳಿಗೆ ನಿತ್ಯೋಪಯೋಗಿ ರಸಾಯನ ಲೇಹ್ಯ.
ಪೂಗ ಟ್ರಿಮ್ - ಮಧುಮೇಹ, ಬೊಜ್ಜು ನಿವಾರಕ.
ಮೇಹ ಅಭಯ ಕಷಾಯ - ಮಧುಮೇಹ ನಿಯಂತ್ರಿಸುವ ಕಷಾಯ
ಧಾನ್ವಂತರ ವಟಿ - ಅಜೀರ್ಣ, ಹೊಟ್ಟೆ ಉಬ್ಬರಕ್ಕಾಗಿ ವಾಯುಮಾತ್ರೆ.
ಅಶ್ವಗಂಧ - ಪುಷ್ಠಿದಾಯಕ, ಶಕ್ತಿವರ್ಧಕ ಕ್ಯಾಫ್ಸೂಲ್
ಇರಿಮೇದಾದಿ ತೈಲ - ದಂತರೋಗ, ಬಾಯಿ ಹುಣ್ಣು, ಒಸಡಿನ ತೊಂದರೆಗಳಿಗೆ ಬಾಯಿ ಮುಕ್ಕಳಿಸುವ ಎಣ್ಣೆ.
ಭೃಂಗಾಮಲಕಾದಿ ತೈಲ - ಬಿಳಿಕೂದಲು, ಕೂದಲು ಉದುರುವುದನ್ನು ತಡೆಗಟ್ಟುವುದು.
ಅಣು ತೈಲ - ಮೂಗು ಕಟ್ಟುವುದು, ತಲೆನೋವು, ಕತ್ತುನೋವು ನಿವಾರಿಸಲು ಮೂಗಿಗೆ ಹಾಕುವ ಎಣ್ಣೆ
ಅಮೃತಾರಿಷ್ಟ - ಎಲ್ಲಾ ರೀತಿಯ ಜ್ವರ, ಶೀತ, ಕೆಮ್ಮು, ಕಫಗಳಿಗೆ ನಿತ್ಯೋಪಯೋಗಿ ಕಷಾಯ
ಕಾಂತಿ ಸ್ನಾನ ಚೂರ್ಣ - ಚರ್ಮವನ್ನು ಸ್ವಚ್ಛಗೊಳಿಸುತ್ತದೆ, ಸ್ಥಳೀಯ ಸೋಂಕುಗಳನ್ನು ನಿಯಂತ್ರಿಸುತ್ತದೆ.
ಕೂಷ್ಮಾಂಡಕ ರಸಾಯನ ಗ್ರಾನ್ಯುಲ್- ಬಲವರ್ಧಕ, ಪಿತ್ತಶಾಮಕ ಮಕ್ಕಳಿಗಾಗಿ
ಸಂಧಿ ಬಾಮ್ - ಸಾಮಾನ್ಯ ನೋವುಗಳಿಗೆ ಉಪಯುಕ್ತವಾಗಿದೆ.