ಮಂಜುಶ್ರೀ ಹೇರ್ ಆಯಿಲ್

Manjushree Hair Oil - English Version (Click here to read)

ಕೇಶ ಸಂರಕ್ಷಣೆ

ಕೂದಲುಗಳ ಆರೋಗ್ಯ ಮತ್ತು ಬೆಳವಣಿಗೆ ಬಗ್ಗೆ ಮಾಹಿತಿ

ಸೌಂದರ್ಯ ಮತ್ತು ಸೌಂದರ್ಯ ವರ್ಧಕಗಳ ಪರಿಕಲ್ಟನೆಯು ಮನುಕುಲ ಮತ್ತು ನಾಗರಿಕತೆಯಷ್ಟೇ ಪ್ರಾಚೀನವಾದುದು. ಮಾನವ ಅನಾದಿ ಕಾಲದಿಂದಲೂ ಸೌಂದರ್ಯವನ್ನು ಕಾಪಾಡಿಕೊಳ್ಳಲು ಗಿಡಮೂಲಿಕೆಗಳನ್ನು ಬಳಸುತ್ತಿದ್ದಾನೆ. ಹೇರಳವಾದ, ಸೊಂಪಾದ ಉದ್ದನೆಯ ಆಕರ್ಷಕ ಕೂದಲು ಆಕರ್ಷಕ ವ್ಯಕ್ತಿತ್ವಕ್ಕೆ ನಿಲುಗನ್ನಡಿಯಂತಿರುತ್ತದೆ. ಈ ಕೂದಲಿನ ಆರೋಗ್ಯಕ್ಕಾಗಿ / ಪುಷ್ಠಿಗಾಗಿ ಪ್ರಕೃತಿಯು ಅಮೂಲ್ಯವಾದ ವಿವಿಧ ಗಿಡಮೂಲಿಕೆಗಳ ವಿಶಿಷ್ಠ ಸಂಯೋಜನೆಯನ್ನು ಆಯುರ್ವೇದ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು/ಬಳಸಿಕೊಳ್ಳಬಹುದು.

ಪ್ರಸ್ತುತ ದಿನಗಳಲ್ಲಿ ನಾವು ಪಾಶ್ಚಿಮಾತ್ಯರ ಸಂಸ್ಕೃತಿ ಮತ್ತು ಜೀವನಶೈಲಿಯ ಅನುಕರಣಿಯಲ್ಲಿ ನಮ್ಮ ಆಹಾರ ಮತ್ತು ಸೌಂದರ್ಯ ವರ್ಧಕಗಳ ಹೆಸರಿನಲ್ಲಿ ರಾಸಾಯನಿಕ ಮಿಶ್ರಣವನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ನಮ್ಮ ಆರೋಗ್ಯ ಮತ್ತು ಕೂದಲಿನ ಬೆಳವಣಿಗೆ ಕುಂಠಿತಗೊಂಡಿದೆ. ಆದುದರಿಂದ ಕೂದಲು ಉದುರುವುದು, ಸೀಳು ಕೂದಲು, ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಸಮಸ್ಯೆ, ಇತ್ಯಾದಿಗಳು ತಲೆದೋರಿವೆ. ಇದರಿಂದ ಮುಕ್ತಿ ಪಡೆಯಲು ಒಳ್ಳೆಯ ಉಪಾಯವಾಗಿ ನಮ್ಮ ಸಂಸ್ಕೃತಿಯಲ್ಲಿ ಬಳಕೆಯಲ್ಲಿರುವ ಗಿಡಮೂಲಿಕೆಗಳ ಉಪಯೋಗವು ಆಯುರ್ವೇದದ ಸೂತ್ರದ ಮೂಲಕ ಸಂಸ್ಕರಿಸಿಕೊಂಡು ಪರಿಹರಿಸಿಕೊಳ್ಳಬಹುದು.


ಮಂಜುಶ್ರೀ ಹೇರ್ ಆಯಿಲ್: ಎಸ್‌ಡಿಎಮ್ ಫಾರ್ಮಸಿ ಸಂಸ್ಥೆಯು ಸುಮಾರು ಆರು ದಶಕಕ್ಕೂ ಮಿಕ್ಕಿದ ಅನುಭವ / ಪರಿಶ್ರಮದಿಂದ ಕೂದಲುಗಳ ಆರೋಗ್ಯಕ್ಕೆ /ಸಮಸ್ಯಗಳಿಗೆ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುವುದು, ಆರೋಗ್ಯಕರ ಕೂದಲನ್ನು ಪಡೆಯಲು ಸಾಂಪ್ರದಾಯಿಕ ಆರೋಗ್ಯ ಸೂತ್ರಗಳನ್ನು ಅನುಸರಿಸಿ ‘ಮಂಜುಶ್ರೀ’ ಹೇರ್ ಆಯಿಲ್ ಅಭಿವೃದ್ಧಿಪಡಿಸಲಾಗಿದೆ. ಕೂದಲಿನ ರಕ್ಷಣೆ ಮತ್ತು ಪರಿಪೂರ್ಣ ಬೆಳವಣಿಗೆ ಇದರ ಪ್ರಧಾನ ಧ್ಯೇಯವಾಗಿದೆ.

ಈ ಪ್ರಕ್ರಿಯೆಯಲ್ಲಿ ಋಷಿಮುನಿ ಪ್ರಣೀತ ಸಾಂಪ್ರದಾಯಿಕ ಸೂತ್ರವನ್ನು ಅಚ್ಚುಕಟ್ಟಾಗಿ ಅನುಸರಿಸಿ ಶಾಸ್ತ್ರೀಯ ತೈಲಪಾಕ, ಕಚ್ಚಾ ವಸ್ತುಗಳ ಸಂಸ್ಕರಣೆ ಹಾಗೂ ಆಧುನಿಕ ತಂತ್ರಜ್ಞಾನಗಳ ಜೊತೆಗೆ ತಯಾರಿಕ ವಿಧಿಯಲ್ಲಿ ಒಂದು ಉನ್ನತ ಮಟ್ಟದ ತಂತ್ರಗಾರಿಕೆಯಿಂದ ಔಷಧಿಯನ್ನು ತಯಾರಿಸಲಾಗುತ್ತದೆ. ಈ ಔಷಧಿಯ ಮುಖ್ಯ ಗುರಿ ಕೂದಲಿನ ರಕ್ಷಣೆ ಹಾಗೂ ಕೂದಲಿಗೆ ಪೌಷ್ಠಿಕಾಂಶವನ್ನು ನೀಡಿ ಕೂದಲನ್ನು ಪುನರ್ಯೌವನಗೊಳಿಸುತ್ತದೆ. ಈ ಪ್ರಕ್ರಿಯೆಯು ಕಫ ಯಾ ಕೆಮ್ಮನ್ನು ಪ್ರಚೋದಿಸುವ ತೀವ್ರ ತಂಪು / ಶೀತವಾಗಿ ವರ್ತಿಸುವುದಿಲ್ಲ. ಬದಲಿಗೆ ಶೀತ ಹಾಗೂ ಕೆಮ್ಮು ಅಥವಾ ಸೈನಸ್ ತಲೆ ನೋವಿನ ಸಮಸ್ಯೆ ಇರುವವರು ಇದರ ಉಪಯೋಗದಿಂದ ಕೂದಲ ಬೆಳವಣಿಗೆಯೊಂದಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಆಯ್ದ ಗಿಡಮೂಲಿಕೆಯಿಂದ ಕಣ್ಣು, ಕಿವಿ, ಮೂಗು ಮತ್ತು ಮಾನಸಿಕ ಆರೋಗ್ಯ / ನೆಮ್ಮದಿಯನ್ನು ಪುನರ್‌ಜ್ಜೀವನಗೊಳಿಸುತ್ತದೆ ಮತ್ತು ಇವುಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಗಿಡಮೂಲಿಕೆಗಳು ಕೂದಲಿನ ಸೌಂದರ್ಯ ಹೆಚ್ಚಿಸುವುದಲ್ಲದೆ ಕೂದಲಿನ ಪೋಷಕಾಂಶಗಳೊಂದಿಗೆ ಕೂದಲಿನ ಬೆಳವಣಿಗೆಗೆ ಅಗತ್ಯವಿರುವ ಕೂದಲಿನ ಕಿರುಚೀಲಗಳಿಗೆ ರಕ್ತ ಚಲನೆಯನ್ನು ಸುಧಾರಿಸಿ ಸಮೃದ್ಧಗೊಳಿಸುವುದು. ಇದರಲ್ಲಿರುವ ಗಿಡಮೂಲಿಕೆಗಳು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಿ ಪೋಷಕ ಹಾಗೂ ಶಾಮಕ ಚಿಕಿತ್ಸೆಗಳ ಮೂಲಕ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ದೃಢವಾಗಿಸುತ್ತದೆ.

ವೈವಿಧ್ಯಮಯ ಕಾರ್ಯತಂತ್ರ ಇರುವ ಗಿಡಮೂಲಿಕೆಗಳ ಆಯ್ಕೆಯಿಂದ ತಯಾರಾಗಿರುವ ಈ ತೈಲವನ್ನು ಎಲ್ಲಾ ಬಗೆಯ ಕೂದಲಿನ ತೊಂದರೆ ಇರುವವರು ಬಳಸಬಹುದು. ಕೂದಲು ಹೊಟ್ಟು, ಕೂದಲು ಉದುರುವಿಕೆ, ಸೀಳುವಿಕೆ ಹಾಗೂ ಅಕಾಲಿಕ ಬೆಳ್ಳಗಾಗುವುದನ್ನು ನಿರಂತರ ಉಪಯೋಗದಿಂದ ನಿವಾರಿಸುತ್ತದೆ. ಮಂಜುಶ್ರೀ ಕೇಶ ತೈಲವು ಕೂದಲಿನ ಬೇರು ಮತ್ತು ನೆತ್ತಿಯನ್ನು ಪೋಷಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ‘ಮಂಜುಶ್ರೀ’ ಕೇಶ ತೈಲ ಚಿಕಿತ್ಸೆಯು ಒಣ ಕೂದಲನ್ನು ಮೃದುವಾಗಿಸುತ್ತದೆ.

ಆಮ್ಲ: ಇದರಲ್ಲಿ ‘ವಿಟಮಿನ್-ಸಿ’ಯ ಶ್ರೀಮಂತಿಕೆಯಿಂದಾಗಿ ತಲೆಯಲ್ಲಿರುವ ಹೊಟ್ಟಿನ ಸಮಸ್ಯೆಯ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ ಕೂದಲಿಗೆ ಪೋಷಣೆಯನ್ನು ನೀಡಿ ವಯಸ್ಸಾಗುವಿಕೆ, ಕೂದಲು ಉದುರುವಿಕೆಯನ್ನು ತಡೆಯುತ್ತದೆ ಹಾಗೂ ಉತ್ಕರ್ಷಣಾ ನಿರೋಧಕವಾಗಿ ಚರ್ಮ ಹಾಗೂ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಬಿಲ್ವ, ಅಮೃತ, ಶುಂಠಿ: ಈ ಸಂಯೋಜನೆಯಿಂದ ತಲೆಯ ಮೇಲೆ ಯಾವುದೇ ಅತಿಯಾದ ಶೀತ ಪರಿಣಾಮ ತಡೆಯುತ್ತದೆ. ಸೈನೋಸಿಟಿಸ್‌ನಿಂದ ಬಳಲುತ್ತಿರುವವರು ಪುನರಾವರ್ತಿತ ಶೀತ, ತಲೆನೋವು ಇರುವವರು ಇದನ್ನು ಸುರಕ್ಷಿತವಾಗಿ ಬಳಸಬಹುದು.

ವಿಡಂಗ, ಕೃಷ್ಣಜೀರಕ : ಈ ಸಂಯೋಜನೆಯು ತಲೆಹೊಟ್ಟು, ತುರಿಕೆ, ಶಿಲೀಂದ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಹಾಗೂ ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ.

ನ್ಯಗ್ರೋಧ, ಶತಾವರಿ, ಹಾಲು: ಇದು ಕೂದಲಿನ ಬೆಳವಣಿಯನ್ನು ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ.

ಹೀಗೆ ಈ ‘ಮಂಜುಶ್ರೀ’ ಕೇಶ ತೈಲವು ವಿವಿಧ ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಇದರಲ್ಲಿನ ಹೇರಳವಾದ ಪ್ರೋಟೀನ್ ಹಾಗೂ ಷೋಷಕಾಂಶಗಳ ಕೊರತೆಗಳನ್ನು ಮರುಪೂರಣಗೊಳಿಸುವುದರಿಂದ ಆರೋಗ್ಯವಾದ ಹಾಗೂ ಬಲವಾದ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.

ತ್ರಿಫಲ: ಕೂದಲಿನ ಕಿರುಚೀಲಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲಕರವಾದ ಔಷಧಗಳ ಗಿಡಮೂಲಿಕೆಯಾಗಿದ್ದು ತನ್ಮೂಲಕ ಕೂದಲುಗಳ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.

ತೆಂಗಿನೆಣ್ಣೆ: ಒಂದು ಅಧ್ಯಯನದ ಪ್ರಕಾರ ತೆಂಗಿನೆಣ್ಣೆಯು ಚರ್ಮದ ಹೊಳಪು ಮತ್ತು ಮೃದುಗೊಳಿಸುವಿಕೆಗೆ ಅತ್ಯುತ್ತಮವಾಗಿದೆ. ೧೪ ದಿನಗಳ ಕಾಲ ಸತತವಾಗಿ ತೆಂಗಿನೆಣ್ಣೆಯನ್ನು ಬಳಸಿದಾಗ, ಬಾಚಣಿಕೆಯಲ್ಲಿ ಉದುರುವ ಕೂದಲನ್ನು ತಡೆಯಲು ಸಹಾಯಮಾಡುತ್ತದೆ.

ಪ್ರಮುಖ ಟಿಪ್ಪಣಿಗಳು

ಪಥ್ಯ: ಕೂದಲಿನ ಆರೋಗ್ಯಕ್ಕೆ ಸೇವಿಸಬಹುದಾದ ಆಹಾರ ಪದಾರ್ಥಗಳು


1.  ದ್ವಿದಳ ಧಾನ್ಯಗಳು (ಉದಾ: ಉದ್ದು, ಹೆಸರು, ಹುರುಳಿ, ಬೀನ್ಸ್, ಕಡಲೆ, ನೆಲಗಡಲೆ ಮುಂತಾದವುಗಳು): ದ್ವಿದಳ ಧಾನ್ಯಗಳನ್ನು ನೀರಿನಲ್ಲಿ ತೊಳೆದು ೧೨-೧೬ ಗಂಟೆ ನೆನೆಸಿ, ಒದ್ದೆ ಬಟ್ಟೆಯಲ್ಲಿ ಮುಂದಿನ ೨೪-೩೬ ಗಂಟೆಗಳ ಕಾಲ ಕಟ್ಟಿ ಮೊಳಕೆ ಬರಿಸಬೇಕು. ಈ ಮೊಳಕೆ ಭರಿಸಿದ ಧಾನ್ಯಗಳನ್ನು ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸು, ಲಿಂಬೆ, ಉಪ್ಪು ಸೇರಿಸಿ ಅವರವರ ರುಚಿಗೆ ತಕ್ಕಂತೆ ಖಾದ್ಯವನ್ನು ತಯಾರಿಸಬಹುದು. ಈ ಖಾದ್ಯವನ್ನು ಸುಮಾರು ೫೦ ಗ್ರಾಂನಂತೆ ವ್ಯಕಿಯೊಬ್ಬ ಸೇವಿಸಬಹುದು. (ಶುಂಠಿ ದೇಹಕ್ಕೆ ತಂಪಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸುವುದರಿಂದ ಇದರ ಪ್ರಮಾಣವನ್ನು ಹೆಚ್ಚಿಸಬಹುದು) ಈ ಆಹಾರ ಪದ್ದತಿಯನ್ನು ವಾರದಲ್ಲಿ ಕನಿಷ್ಠ ೨-೩ ಬಾರಿಯಾದರೂ ಸೇವಿಸಬೇಕು. ಇದರೊಂದಿಗೆ ಮನೆಯಲ್ಲೇ ತಯಾರಿಸಿದ ಹಣ್ಣು ಮತ್ತು ತರಕಾರಿಗಳ ರಸವು ಆರೋಗ್ಯಕ್ಕೆ ಉತ್ತಮವಾಗಿದೆ. (ಸಣ್ಣ ಪ್ರಮಾಣದ ಬೆಲ್ಲದೊಂದಿಗೆ ಬೆರೆಸಿದ ರಸವು ಒಳ್ಳೆಯ ರುಚಿಯನ್ನು ನೀಡುತ್ತದೆ). ಇದು ನಮ್ಮ ಕೂದಲಿನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಕೂದಲಿನ ಉದುರುವಿಕೆಯನ್ನು ತಡೆಗಟ್ಟಿ ಸೊಂಪಾದ ಕೂದಲು ಬೆಳೆಯಲು ಮತ್ತು ನಮ್ಮ ದೇಹದ ಆರೋಗ್ಯಕ್ಕೂ ಉತ್ತಮ.

2. ಬಿಸಿಯಾದ ಆಹಾರ ಪದಾರ್ಥಗಳ ಸೇವನೆ ಆಹಾರ ಪದಾರ್ಥದಲ್ಲಿನ ಹೆಚ್ಚಿನ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ.

3. ತಾಜಾ ಹಣ್ಣಿನ ಮತ್ತು ತರಕಾರಿಗಳ ಮಿಶ್ರಣವು ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ.

4. ನಮ್ಮ ಆಹಾರದಲ್ಲಿ ಮೊಸರು, ಬೇಕರಿ ಪದಾರ್ಥಗಳು, ಉಪ್ಪಿನಕಾಯಿ, ಜಂಕ್‌ಪುಡ್ ಕರಿದ ಪದಾರ್ಥಗಳನ್ನು ಆದಷ್ಟು ತಪ್ಪಿಸಬೇಕು. ತಾಜಾ ಮಜ್ಜಿಗೆ ಉತ್ತಮ.

5. ಶೀತಲಿಕರಿಸಿದ ಆಹಾರ ಪದಾರ್ಥಗಳನ್ನು ಹಾಗೂ ತಂಪು ಪಾನೀಯಗಳನ್ನು ಆದಷ್ಟು ಸೇವಿಸಬಾರದು. ಮದÀ್ಯಪಾನ ಆರೋಗ್ಯಕ್ಕೆ ಹಾನಿಕರ.

6. ಅತಿಯಾದ ಸಿಹಿ, ಹುಳಿ ಹಾಗೂ ಮಸಾಲೆಯುಕ್ತ ಪದಾರ್ಥಗಳು ಕೂದಲಿನ ಬೆಳವಣಿಗೆಗೆ ಹಾನಿ ಉಂಟು ಮಾಡುತ್ತದೆ.

7. ಆಹಾರವನ್ನು ಸೇವಿಸಲು ಸಾಧ್ಯವಾಗದಿದ್ದಲ್ಲಿ ಉತ್ತಮ ದೈಹಿಕ ಆರೋಗ್ಯಕ್ಕಾಗಿ ಒಂದು ಲೋಟ ಉಗರುಬಿಸಿ ಹಾಲನ್ನಾದರು ಕುಡಿಯಬೇಕು.

8. ‘ಮಂಜುಶ್ರೀ’ ಎಣ್ಣೆಯನ್ನು ತಲೆ ಸ್ನಾನದ ನಂತರ ಹಚ್ಚಿ ಇನ್ನೊಂದು ಸ್ನಾನದ ತನಕ ತಲೆಯಲ್ಲೇ ಉಳಿಸಿಕೊಳ್ಳುವುದರ ಮೂಲಕ ಈ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಬಹುದು. ಚಿಕಿತ್ಸೆಯ ಪ್ರಯೋಜನವನ್ನು ಪರಿಣಾಮಕಾರಿಯಾಗಿಸಲು ಎಣ್ಣೆಯನ್ನು ಬೆರಳಿನ ತುದಿಗಳಿಂದ ಕೂದಲಿನ ಬುಡಕ್ಕೆ ಸವರಿ ಮೃದುವಾದ ಮಸಾಜ್ ಮಾಡುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ.

9. ತಲೆ ಸ್ನಾನಕ್ಕೆ ಕಡಲೆಹಿಟ್ಟು ಉತ್ತಮವಾಗಿದೆ. ಅಗತ್ಯವಿದ್ದಲ್ಲಿ ಮಾತ್ರವೇ ಮೃದುವಾದ ಸಾಬೂನು, ಶ್ಯಾಂಪೂಗಳನ್ನು ಬಳಸಿ, ತುಂಬಾ ಬಿಸಿಯಾದ ಮತ್ತು ತುಂಬಾ ತಣ್ಣಗಿನ ನೀರು ತಲೆ ಸ್ನಾನಕ್ಕೆ ಒಳ್ಳೆಯದಲ್ಲ.

10. ಸೂರ್ಯನ ಕಿರಣ, ಧೂಳು, ಹೊಗೆ ಮುಂತಾದವುಗಳಿಂದ ಕೂದಲು ಮತ್ತು ತಲೆಯನ್ನು ಮುಚ್ಚಲು ಪ್ರಯತ್ನಿಸಬೇಕು.

11. ಕೂದಲನ್ನು ಚೆನ್ನಾಗಿ ನೋಡಿಕೊಳ್ಳಿ. ಕೂದಲಿನ ಸಿಕ್ಕು ಬಿಡಿಸಲು ಬಲವಂತವಾಗಿ ಬಾಚುವುದನ್ನು ತಪ್ಪಿಸಿ, ಕೂದಲನ್ನು ಎಳೆಯಬೇಡಿ.

12. ನೆತ್ತಿಯ ಮೇಲೆ ಯಾವುದೇ ಸೋಂಕು ಕಂಡು ಬಂದರೆ ತಕ್ಷಣವೇ ಕಾಳಜಿ ವಹಿಸಬೇಕು.

13. ವ್ಯಕ್ತಿಯು ಕೆಲವು ಸಮಸ್ಯೆಗಳಿಗೆ ಔಷಧಗಳನ್ನು ಸೇವಿಸುತ್ತಿದ್ದಲ್ಲಿ (ಗರ್ಭ ನಿರೋಧಕ, ಥೈರಾಯ್ಡ್, ತೀವ್ರವಾದ ಸೋಂಕು, ಬೊಕ್ಕ ತಲೆ - ಅನುವಂಶಿಕ ಮುಂತಾದವುಗಳು) ಈ ಎಣ್ಣೆಯ ಉಪಯೋಗವು ಅಷ್ಟಾಗಿ ತೃಪ್ತಿಕರವಾಗಿರುವುದಿಲ್ಲ. ಈ ಸಂದರ್ಭದಲ್ಲಿ ಹತ್ತಿರದ ತಜ್ಞ ವೈದ್ಯರ ಸಮಾಲೋಚನೆ ಅಗತ್ಯವಿದೆ.

14. ಅಲೋಪೇಸಿಯಾ ಅರೆಟಾ (ನಿರ್ದಿಷ್ಟ ಸೋಂಕಿನಿಂದಾಗಿ ಉಂಟಾಗುವ ತಲೆ ಕೂದಲು ಉದುರುವಿಕೆ) ಸಂದರ್ಭದಲ್ಲಿ ‘ಮಂಜುಶ್ರೀ’ ಎಣ್ಣೆ ಜೊತೆ ಬಾಧಿತ ಪ್ರದೇಶದ ಮೇಲೆ ಒಣಗಿದ ಕೊತ್ತಂಬರಿ ಸೊಪ್ಪಿನ ಬೇರುಗಳನ್ನು ಹುಡಿಮಾಡಿ ಉಪಯೋಗಿಸಬೇಕು. ಈ ಚಿಕಿತ್ಸೆಯನ್ನು ಒಂದು ತಿಂಗಳ ಕಾಲ ಮುಂದುವರಿಸಬೇಕು. ಇದು ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮಸ್ಯೆ ಮುಂದುವರಿದರೆ ಹತ್ತಿರದ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

ಬಳಕೆ: ಚಿಕಿತ್ಸೆಯ ಪ್ರಯೋಜನವನ್ನು ಉತ್ತಮವಾಗಿ ಪಡೆಯಲು ದಿನಾಲೂ ‘ಮಂಜುಶ್ರೀ’ ಎಣ್ಣೆಯನ್ನು ಬಳಸಲು ಸೂಚಿಸಲಾಗುತ್ತದೆ. ಕೂದಲಿನ ಬುಡಕ್ಕೆ ಬೆರಳ ತುದಿಗಳಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ. ಈ ಎಣ್ಣೆಯನ್ನು ದಿನವಿಡಿ ಕೂದಲಿನಲ್ಲಿರಿಸಿ ಮತ್ತೆ ಸೌಮ್ಯವಾದ ಸಾಬೂನು ಅಥವಾ ಶ್ಯಾಂಪೂ ಬಳಸಿ ಸ್ನಾನ ಮಾಡುವುದರಿಂದ ಉತ್ತಮ ಪರಿಣಾಮ ಸಿಗುತ್ತದೆ.

- ಡಾ. ಮುರಳೀಧರ ಆರ್ ಬಲ್ಲಾಳ್ (ಎಂ.ಡಿ. ಆಯು)
ಮುಖ್ಯ ಪ್ರಬಂಧಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ, ಉಡುಪಿ
- ಪ್ರಾಚಾರ್ಯರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉಡುಪಿ
ಸದಸ್ಯರು, ವೈಜ್ಞಾನಿಕ ಸಲಹಾ ಮಂಡಳಿ(ಎಸ್‌ಎಬಿ), ಭಾರತೀಯ ಆಯುರ್ವೇದ ಔಷಧ ಮತ್ತು ಹೋಮಿಯೋಪತಿ ಫಾರ್ಮಾ ಆಯೋಗ, ದೆಹಲಿ, ಆಯುಷ್, ಭಾರತ ಸರ್ಕಾರ